Showing posts with label Kannada Lullaby Songs. Show all posts
Showing posts with label Kannada Lullaby Songs. Show all posts

Thursday, March 17, 2022

Kannada Lali hadugalu | lullaby Songs | Attitta nodadiru, Attu horaladadiru | ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

Song- ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

Lyricist/Poet - Shri. K S Narasimha Swamy 

===============================================

 ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ||


ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ||


ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೇ,

ಮಲಗು ತೊಟ್ಟಿಲ ಸಿರಿಯೆ, ದೇವರಂತೆ|

ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,

ಮಲಗು ಚಂದಿರನೂರ ಹೋಗುವೆಯಂತೆ||

ಮಲಗು ಚಂದಿರನೂರ ಹೋಗುವೆಯಂತೆ||

ಮಲಗು ಚಂದಿರನೂರ ಹೋಗುವೆಯಂತೆ||


ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು|

ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,

ವೀಣೆ ನುಡಿಸುವರಂತೆ, ಸುತ್ತ ನೆರೆದು||

ವೀಣೆ ನುಡಿಸುವರಂತೆ, ಸುತ್ತ ನೆರೆದು||


ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ|

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ..

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ|

ಜೋ ಜೋಜೋ ಜೋ ಜೋ ಜೋಜೋ ಜೋ

ಜೋ ಜೋಜೋ ಜೋ ಜೋ ಜೋಜೋ ಜೋ||



Kannada Lullaby Songs | kannada Lali Hadugalu - ಮಲಗೋ ಮಲಗೆನ್ನ ಮರಿಯೆ

Song- ಮಲಗೋ ಮಲಗೆನ್ನ ಮರಿಯೆ


 ಸಾಹಿತ್ಯ – ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ – ಸುನೀತಾ ಚಂದ್ರಕುಮಾರ್

ಗಾಯನ – ಸುಲೋಚನ ವೆಂಕಟೀಶ್

=====================================================================

ಮಲಗೋ ಮಲಗೆನ್ನ ಮರಿಯೆ

ಬಣ್ಣದ ನವಿಲಿನ ಗರಿಯೆ,

ಎಲ್ಲಿಂದ ಬಂದೆ ಈ ಮನೆಗೆ

ನಂದನ ಇಳಿದಂತೆ ಬುವಿಗೆ?


ತಾವರೆದಳ ನಿನ್ನ ಕಣ್ಣು

ಕೆನ್ನೆ ಮಾವಿನ ಹಣ್ಣು,

ಸಣ್ಣ ತುಟಿಯ ಅಂದ

ಬಣ್ಣದ ಚಿಗುರಿಗು ಚಂದ,

ನಿದ್ದೆ ಮರುಳಲ್ಲಿ ನಗಲು

ಮಂಕಾಯ್ತು ಉರಿಯುವ ಹಗಲು!


ಒಲುಮೆ ಹರಸಿದ ಕಂದ

ಹುಣ್ಣಿಮೆ ದೇವಗು ಚಂದ,

ಬೆಳಕ ಕರೆವ ಅರುಣ

ನಿನ್ನ ನಗೆಯ ಕಿರಣ,

ಚೆಲುವಲ್ಲಿ ಸಾಟಿಯೆ ಕಾಮ?

ತಿಮ್ಮಪ್ಪನಿಗೂ ಮೂರು ನಾಮ!


Kannada movie Lullaby songs | Kannada evergreen and melodious lullaby songs for your babies

Kannada Lullaby songs  In Kannada movies, we have witnessed many Melodious songs and grownup hearing them. There will be a moment where, man...